17/12/12

ಒಳಗುಳಿದ ಮಾತಿನ ನೆಂಪು

ಕನ್ನಡ ಸಂಘದಿಂದ ಬಹುಮಾನ ಪಡೆಯಲೆಂದು ಕ್ರೈಸ್ಟ್ ಕಾಲೇಜಿಗೆ ಎಡತಾಕುವಾಗ ಕಳೆದ ಐದು ವರ್ಷಗಳಲ್ಲಿ ಕಿವಿಗೆ ಬಿದ್ದ ಗುಂಯ್'ಗುಡುವ ಕೆಲವು ಮಾತುಕಥೆಗಳು....

"ಬಂದ್ರಾ ನಾಗರಾಜ್..ಪ್ರಯಾಣ ಹೇಗಾಯ್ತು..ದಾರಿ ಗೊತ್ತಾಯ್ತು ತಾನೇ, ಏನೂ ಸಮಸ್ಯೆ ಆಗ್ಲಿಲ್ವಲ್ಲ..?" (ಕನ್ನಡ ಸಂಘದ ಸಂಚಾಲಕಿ ಡಾ.ರತಿ ಮೇಡಮ್ ಮೊದಲ ವರ್ಷದ ಸಮಾರಂಭ ಶುರುವಾಗುವ ಮುಂಚಿನ ಕುಶಲೋಪರಿಯಲ್ಲಿ ಕೇಳಿದ್ದು)

"ಬರೀತಾ ಇರಯ್ಯ, ಪ್ರಶಸ್ತಿ ಬಂತು ಅಂತ ಬರಿಯೋದ್ ಬಿಟ್ಬಿಡ್ಬೇಡ..."(ಬಹುಮಾನ ಬಂದ ಮೊದಲ ವರ್ಷದ ಸಮಾರಂಭದಲ್ಲಿ ಅತಿಥಿಯಾಗಿ ಬಂದಿದ್ದ ಜಿ.ವೆಂಕಟಸುಬ್ಬಯ್ಯನವ್ರು ಪುಸ್ತಕಗಳನ್ನು ಕೊಡ್ತಾ ಹೇಳಿದ್ದು)

"ಚೆನ್ನಾಗಿದೆ ನಿಮ್ 'ಗಾಳಿದೀಪ' ಪದ್ಯ..ಇನ್ನೂ ಚೆನ್ನಾಗ್ ಬರೀರಿ..."(ತೀರ್ಪುಗಾರರಾಗಿದ್ದ ಚಿಂತಾಮಣಿ ಕೊಡ್ಲೆಕೆರೆ ನನ್ ಕವಿತೆ ಬಗ್ಗೆ ಹೇಳಿದ್ದು)

"ನಿಮ್ಮನ್ನೆಲ್ಲೋ ನೋಡಿದ ಹಾಗಿದ್ಯಲ್ಲ...?!"(ಬಹುಮಾನ ಕೊಡುತ್ತಾ ಹೆಚ್.ಎಸ್.ವೆಂಕಟೇಶಮೂರ್ತಿ ಅನುಮಾನಿಸಿದ್ದು...ನೀನಾಸಂನ ಸಂಸ್ಕೃತಿ ಶಿಬಿರದಲ್ಲಿನ ಒಂದು ರಾತ್ರಿ ನಡೆದ ಅನೌಪಚಾರಿಕ ಚರ್ಚೆಯಲ್ಲಿ ಕವಿತೆಯ ಕುರಿತು ಮನದಣಿಯೆ ಕೇಳ್ವಿ ಕೇಳಿದ್ದೆ ಅವರಿಗೆ!)

"ನಾವು ಇನ್ನೊಂದೆರಡು ಸಾಹಿತ್ಯ ಸ್ಪರ್ಧೆ ಮಾಡಿದ್ರೆ ನಾಗರಾಜ್ ಅದ್ರಲ್ಲೂ ಬಹುಮಾನ ತಗೋತಿದ್ರೇನೋ ಒಟ್ಟಿಗೇ..."(ಕ್ರೈಸ್ಟ್ ಕನ್ನಡ ವಿಭಾಗದ ಶಿವಪ್ರಸಾದ್ ಸರ್ ಅವ್ರ ಉದ್ಗಾರ- ಕಥೆ, ಕವಿತೆ ಎರಡೂ ಒಟ್ಟಿಗೇ ಬಹುಮಾನಕ್ಕೆ ಆಯ್ಕೆಯಾಗಿದ್ದಕ್ಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ