18/9/12

ಹಿರೋಶಿಮಾದ ಎದುರು ನಿಂತು...


ಅದು 2003ರ ಆಗಸ್ಟ್ 6. ನಾವಿದ್ದ ಹತ್ತನೇ ತರಗತಿಯ ಕ್ಲಾಸು ಇನ್ನೇನು ಶುರುವಾಗಬೇಕು. ಸುಧಾ ಸಾಪ್ತಾಹಿಕದಲ್ಲಿ ನಾ ಓದಿಕೊಂಡಿದ್ದ ಲೇಖನವೊಂದು ಬಿಟ್ಟೂಬಿಡದೆ ಕಾಡಹತ್ತಿತು.

ಎರಡನೇ ಪ್ರಪಂಚ ಯುದ್ಧದಲ್ಲಿ ಜಪಾನ್ ಮೇಲೆ ಅಣುಬಾಂಬ್ ಪ್ರಯೋಗವಾಗಿ ಲೆಕ್ಕವಿಲ್ಲದಷ್ಟು ಜನ ಮಾಯಕರು ಪ್ರಾಣತೆತ್ತ ದಿನದ ಕಹಿನೆನಪು ಈ ದಿವಸಕ್ಕೆ ಅಂಟಿಕೊಂಡಿತ್ತು. ವಿಶ್ವಸಂಸ್ಥೆಯ ವತಿಯಿ ದಿನವನ್ನು ಶಾಂತಿದಿನವನ್ನಾಗಿ ಆಚರಿಸಲಾಗ್ತಾ ಇತ್ತು. ಸುಧಾದಲ್ಲಿನ ಆ ಲೇಖನವನ್ನು ಯಾರು ಬರೆದದ್ದು ಅಂತ ನೆನಪಿಲ್ಲ ಗ. ಆದ್ರೆ ಆ ಲೇಖನ ಮಾತ್ರ ನನ್ನನ್ನು ತುಂಬಾನೇ ಪ್ರಭಾವಿಸಿತ್ತು. ತಕ್ಷಣವೇ ಏನೋ ನಿರ್ಧಾರ ಮಾಡಿದೆ.

ಬ್ಯಾಗೊಳಗಿದ್ದ ಬಣ್ಣದ ಸೀಮೆಸುಣ್ಣಗಳನ್ನು ಎತ್ಕೊಂಡೆ. ಬೋರ್ಡ್'ನ ಮೇಲೆ ಚಂದದ ಕ್ಷರಗಳಲ್ಲಿ ಅವತ್ತಿನ ವಿಶೇಷ ಬರೆದು "ಪ್ರೇಯರ್ ಮುಗಿಸ್ಕೊಂಡ್ ಬಂದ್ ತಕ್ಷಣ ಲ್ರೂ ಎರಡ್ ನಿಮ್ಷ ಮೌನಾಚರಣೆ ಮಾಡೋಣ" ಅಂದೆ. ಮಾನಿಟರ್ ಮಾತು. ಯಾರೂ ತೆಗೆದು ಹಾಕುವಂತಿರ್ಲಿಲ್ಲ. ಗ್ಲಿ ಅಂದ್ರು. ನಾನಂದುಕೊಡಂತೆ ಮೌನಾಚರಣೆ ನಡೀತು. ಆದ್ರೆ ಆಮೇಲೆ ಆದದ್ದು ಮಾತ್ರ ನಂಗೆ ಅನಿರೀಕ್ಷಿತವಾಗಿತ್ತು.
 * * * * *
ಮೊದಲ ಕ್ಲಾಸು ಇಂಗ್ಲಿಷ್ ಮೇಸ್ಟ್ರಾಗಿದ್ದ ಎನ್.ಎ.ಕೆ(ನೌಶದ್ ಅಹ್ಮದ್ ಖಾಜಿ) ಅವ್ರದ್ದು. ಅವ್ರು ಬರೋದಕ್ಕೆ ಮುಂಚೇನೇ ಬೋರ್ಡ್ ಕ್ಲೀನ್ ಮಾಡುವಾ ಅಂದ್ಕೊಂಡೆ. ಆಗ್ಲೇ ಇಲ್ಲ. ಭಾರೀ ಸ್ಟ್ರಿಕ್ಟ್ ಮನುಷ್ಯ ಬೇರೆ. ಕೈ ಹಿಸುಕಿಕೊಳ್ಳೋಕೆ ಶುರುಮಾಡಿದೆ. ಮೇಸ್ಟ್ರು ಬಂದವ್ರು ಬೋರ್ಡ್'ನಲ್ಲಿ ಇದ್ದುದನ್ನು ಓದಿದ್ರು.

"ಯಾರು ಬರೆದಿದ್ದು" ಕೇಳಿದ್ರು.

ಕ್ಲಾಸಲ್ಲಿ ನಿಜವಾಗ್ಲೂ ಪಿನ್'ಡ್ರಾಪ್ ಸೈಲೆನ್ಸ್.

ಮೆಲ್ಲಗೆ ಎದ್ದು ನಿಂತೆ...

"ಸಿಟ್'ಡೌನ್ ಪ್ಲೀಸ್..." ಧ್ವನಿ ಯಾಕೋ ಭಾವುಕವಾಗಿದೆ ಅನ್ನಿಸ್ತು.

"ಪ್ಲೀಸ್ ಓಪನ್ ದಿ ಪೇಜ್ ನಂಬರ್.......... ಟುಡೇ ವಿ ಸ್ಟಾರ್ಟ್ ಎ ನ್ಯೂ ಲೆಸನ್...'ಹಿರೋಶಿಮಾ"
* * * * *

ಕ್ಲಾಸಲ್ಲಿದ್ದ ಎಲ್ರೂ ನನ್ಕಡೇನೇ ನೋಡೋಕೆ ಶುರುಮಾಡಿದ್ರು. ಮೇಸ್ಟ್ರು ಬೈತಾರೇನೋ ಅಂತ ಬಿಸಿಯಾಗಿದ್ದ ನನ್ನ ಇಡೀ ಮೈಗೆ ಒಮ್ಮೆಗೇ ಕೊರೆಯುವ ಥಂಡಿ ನೀರು ಸೋಕಿದಂತಾಗಿ ಮೈ ಝಲ್ಲಂತು. ಬೋರ್ಡ್ ಮೇಲೆ ಅದನ್ನು ಬರೆದಿದ್ದ ನಾನು, ನನ್ನ ಮಾತು ಕೇಳಿ ಮೌನಾಚರಣೆ ಮಾಡಿದ್ದ ಕ್ಲಾಸ್'ಮೇಟ್ಸು, ಅದೇ ವಿಷ್ಯದ ಬಗ್ಗೆ ಪಾಠ ಮಾಡೋಕೆ ತಯಾರಾಗಿ ಬಂದಿದ್ದ ಮೇಸ್ಟ್ರು ಎಲ್ರ ಕಂಗಳೂ ಇನ್ನೇನು ಕಂಬನಿ ತುಳುಕಿಸುವಂತಿದ್ದವು....

ಅವತ್ತು 'ಹೊರೋಶಿಮಾ ದಿವಸ' ಅನ್ನೋದು ಮೇಸ್ಟ್ರಿಗೆ ನೆನಪಿರ್ಲಿಲ್ಲ!

'ಹೊರೋಶಿಮಾ'ದ ಹಿಂದಿನ ಲೆಸೆನ್ನು ಕಳೆದ ಕ್ಲಾಸಿನಲ್ಲೇ ಮುಗಿದುಹೋಗಿತ್ತು ಅನ್ನೋದನ್ನು ನಾನು ನೆನಪಿಟ್ಟಿರ್ಲಿಲ್ಲ!  

   

 

6/9/12

ಬುದ್ಧನ ಪಕ್ಕ ಕುಳಿತಿದ್ದ ಬುದ್ಧ


ಕುವೆಂಪು ವಿವಿ ಕ್ಯಾಂಪಸ್ಸಿನ 'ಕುವೆಂಪು ಶತಮಾನೋತ್ಸವ ಭವನ'ದೆದುರು ಹಾದುಹೋಗುವಾಗ ಅಲ್ಲಿರುವ ಬುದ್ಧನ ಪುತ್ಥಳಿಯತ್ತ ನೋಡಿ, ಆತನ ನಗುವನ್ನು ತುಟಿಗೆ ತಂದುಕೊಂಡು ಮುಂದಕ್ಕೆ ಹೋಗೋದು ನನ್ನ ರೂಢಿ.

ಅವತ್ತೂ ಹಾಗೆ ಮಾಡುವಾಗ ಕಂಗಳು ಅಚಾನಕ್ಕಾಗಿ ಪುತ್ಥಳಿಯ ಪಕ್ಕಕ್ಕೆ ಹೊರಳಿದವು. ಕಾಲುಗಳು ಸ್ವಲ್ಪ ಹೊತ್ತು ಸುಮ್ಮನಿರುವಂತೆ ಆದೇಶಿಸಿಕೊಂಡವು. ಪುತ್ಥಳಿಯ ಸುತ್ತಲಿನ ಹುಲ್ಲುಹಾಸನ್ನು ಶುಚಿಗೊಳಿಸಲು ಬಂದಿದ್ದ ಕಾರ್ಮಿಕ ಮಹಿಳೆಯೊಬ್ಬರು ಹುಲ್ಲುಹಾಸಿನ ಮೇಲೆ ಥೇಟ್ ಬುದ್ಧನಂತೆಯೇ ಕುಳಿತಿದ್ದರು!










ಸೆಮಿನಾರಿನಲ್ಲಿ ಓದಲ್ಪಟ್ಟ ಲಗ್ನಪತ್ರಿಕೆಗಳು!

ದ್ವಿತೀಯ ವರ್ಷದ ಮಾಸ್ಟರ್ ಡಿಗ್ರಿಯಲ್ಲಿನ ಸೆಮಿನಾರ್ ತರಗತಿಯದು. ಸಿನಿಮಾ ಅಧ್ಯಯನ ಪತ್ರಿಕೆಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಒಬ್ಬೊಬ್ಬರು ಸಿನಿಮಾ ನಿರ್ದೇಶಕರ ಪರಿಚಯಾತ್ಮಕ ವಿಶ್ಲೇಷಣೆ ಮಾಡಲಿಕ್ಕಿತ್ತು. ಅದರಲ್ಲಿ ಬಹುತೇಕರ ಸೆಮಿನಾರ್ ಶುರುವಿಗೆ ಹೀಗಿತ್ತು:
 (ಉದಾಹರಣೆಗೆ) 'ಕಮಲಮ್ಮ ಮತ್ತು ಸೂರಪ್ಪ ಇವರ ಮಗನಾದ..........'

ಸೆಮಿನಾರ್ ಕೇಳುತ್ತಿದ್ದ ನನಗೆ ತಕ್ಷಣವೇ ಏನೋ ನೆನಪಾದಂತಾಯ್ತು... "ಅರೆ! ನಮ್ ಹಳ್ಳಿ ಕಡೆ ಲಗ್ನಪತ್ರಿಕೆ ಓದಿಸೋದೂ ಹೀಗೇ ಅಲ್ವಾ?!"

ತೇಜಸ್ವಿ ಜೊತೆ ಒಂದು ಸಂಜೆ...


ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಕಲಾಪ್ರತಿಭೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ. "ನನ್ನ ಮೆಚ್ಚಿನ ಸಾಹಿತಿ" ಭಾಷಣದಲ್ಲಿ ದ್ವಿತೀಯ ಬಹುಮಾನವಿತ್ತು ನನಗೆ. ತೇಜಸ್ವಿ ಬಗೆಗೆ ಮನಸಾರೆ ಚಂದ ಮಾತಾಡಿದ್ದೆ ಅವತ್ತು.

ಸಮಾರಂಭ ಮುಗೀತು. ಅತ್ತ ಹೋಗಿ ಕನ್ನಡ ಭವನದ ಮೆಟ್ಟಿಲ ಮೇಲೆ ಮಂಕು ಕವಿದವನಂತೆ ಸಂಜೆಬಾನ ದಿಟ್ಟಿಸುತ್ತಾ ಕುಂತಿದ್ದೆ. ಅದ್ಯಾಕೋ ಅವತ್ತೊಂದು ದಿನ ಮಾತ್ರ ಅಷ್ಟೊಂದು ಗದ್ದಲದೊಳಗಿದ್ದರೂ ನಾನು ಬೆಂಗಳೂರಿನಲ್ಲಿದ್ದೇನೆ ಅನ್ನೋದೇ ಮರೆತುಹೋಗಿತ್ತು. ಸುಗಮ ಸಂಗೀತದಲ್ಲಿ ಪ್ರಶಸ್ತಿ ಗೆದ್ದಿದ್ದ ಶಿವಮೊಗ್ಗದ ಆ ಉದ್ದ ಜಡೆಯ ಹುಡುಗಿ ನನ್ನೆದುರು ಸ್ವಲ್ಪ ದೂರದಲ್ಲೇ ಹಾದುಹೋದರೂ ಅವಳೆಡೆಗೆ ಕಣ್ಣುಗಳು ಚಲಿಸಿದವೇ ಹೊರತು ಮನ ಕದಲಲಿಲ್ಲ. ನನ್ನ ಪಕ್ಕ ಭಾಷಣದಲ್ಲಿ ತೃತೀಯ ಬಹುಮಾನ ಪಡೆದ ಹಂಪಿ ವಿವಿಯ ಹಿರಿಯ ವಿದ್ಯಾರ್ಥಿಯೊಬ್ಬ ನಂದತುಂದಿಲನಾಗಿ ಎಲ್ಲರಿಗೂ ಫೋನಾಯಿಸುತ್ತಲಿದ್ದ. ನನ್ನ ಮೌನದಿಂದ ದಂಗಾದ ತ ಕೇಳಿದ್ದ, 'ನಾನೇ ಎಲ್ರಿಗೂ ಫೋನಚ್ಚಿ ಹೇಳ್ತಿದ್ದೀನಿ, ನೀವ್ಯಾಕ್ರಿ ಹಿಂಗ್ ಕುಂತೀರಿ....?'. ಅಚ್ಚರಿಯಿತ್ತು ಅವನ ದನಿಯಲ್ಲಿ.

ಅದೆಲ್ಲಿತ್ತೋ ದಟ್ಟ ವಿಷಾದದ ನಗುವೊಂದು ಮಿಂಚಿನಂತೆ ಸುಳಿದುಹೋಯ್ತು. ನನಗೆ ಈ ವಿಷಯವನ್ನು ತೇಜಸ್ವಿಯವರ ಹೊರತು ಬೇರಾರಿಗೂ ಮೊದಲು ಹೇಳಬೇಕೆನಿಸಿರಲಿಲ್ಲ. ದರೆ ಆ ಹೊತ್ತಿಗೆ ತೇಜಸ್ವಿ ಇರಲಿಲ್ಲ.